Ganesha chaturthi

ಗಣೇಶ
ಓಂ ಗಣೇಶಾಯ ನಮಃ

ಗಣೇಶ ಅನೇಕ ಹಿಂದೂಗಳ ಆರಾಧ್ಯ ದೈವ. ಮಾತೆ ಪಾರ್ವತಿ ಹಾಗೆ ಮಹಾದೇವರ ಮಗ. ಗಣೇಶನಿಗೆ ಏಕದಂಥ, ವಕ್ರತುಂಡ, ವಿನಾಯಕ, ವಿಗ್ನವಿನಾಶಕ ಈ ರೀತಿಯ ಹಲವಾರು ಹೆಸರುಗಳಿವೆ.ಇವರನ್ನ ಕರಿಮುಖ ಅಂತಲೂ ಕರೀತಾರೆ. ಗಣೇಶನ ಬಗ್ಗೆ ಹಲವಾರು ಪುರಾಣಗಳಲ್ಲಿ ಉಲ್ಲೇಖಗಳಿವೆ. ಅದರಲ್ಲಿ  ಗಣೇಶ ಪುರಾಣ, ಮುದ್ಗಲ ಪುರಾಣ, ಬ್ರಹ್ಮ ಪುರಾಣ ಮುಖ್ಯವಾದವು. 

ಗಣೇಶ ಚತುರ್ಥಿ ಹಿಂದಿನ ಕಥೆ 

ಮಹಾದೇವರು ತಪಸ್ಸಿಗೆ ಹೋಗಿರುವಾಗ ಒಂದುದಿನ ಪಾರ್ವತಿಯು ಅವರ ಮೈಕೊಳೆಇಂದ  ಒಂದು ಮಗುವಿನ ಗೊಂಬೆಯನ್ನು ಮಾಡತ್ತಾರೆ ಹಾಗೆ ಆ ಗೊಂಬೆಗೆ ಜೀವವನ್ನು ಕೊಡುತ್ತಾರೆ. ನಂತರ ಅವರು ಸ್ನಾನಕ್ಕೆಂದು ಹೊರಡುವ ಸಮಯದಲ್ಲಿ ಆ ಬಾಲಕನಿಗೆ ಕರೆದು ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ ಯಾರನ್ನು ಒಳಗೆ ಬಿಡಬೇಡ ಎಂದು ಹೇಳಿ ಹೋಗುತ್ತಾರೆ. ಅದೇ ಸಮಯಕ್ಕೆ ಮಹಾದೇವರು ತಮ್ಮ ತಪಸ್ಸು ಮುಗಿಸಿ ಮರಳಿ ಬರುತ್ತಾರೆ ಆಗ ಅವರಿಗೆ ಬಾಲಕ ಎದುರಾಗಿತ್ತಾನೆ ಹಾಗೂ ಮಹದೇವರನ್ನು ತಡೆದು ನಿಲ್ಲಿಸುತ್ತಾನೆ. ಮಹಾದೇವರು ಏನು ಹೇಳಿದರು ಒಳಗೆ ಬಿಡುವುದಿಲ್ಲ. ಮೊದಲೇ ಆಯಾಸಗೊಂಡಿದ್ದ ಮಹಾದೇವರು ಕೋಪಗೊಂಡು ತಮ್ಮ ತ್ರಿಶೂಲದಿಂದ ಆ ಬಾಲಕನ ರುಂಡ ಹಾಗೂ ಮುಂಡಗಳನ್ನು ಛೇದಿಸುತ್ತಾರೆ. ಆಗ ಪಾರ್ವತಿಯು ಸ್ನಾನವನ್ನು ಮುಗಿಸಿಕೊಂಡು ಹೊರಗೆ ಬಂದು ನೋಡಿದಾಗ ರುಂಡ ಹಾಗೂ ಮುಂಡ ಬೇರ್ಪಟ್ಟ ದೇಹವನ್ನು ನೋಡಿ ದುಃಖಿಸುತ್ತಾರೆ ಹಾಗೂ ನಡೆದ ಎಲ್ಲಾ ವಿಚಾರವನ್ನು ಹೇಳುತ್ತಾರೆ. ಪಾರ್ವತಿಯ ಆಕ್ರಂದನವನ್ನು ನೋಡಲಾಗದೆ ಇಡೀ ದೈವಗಣ ಅಲ್ಲಿ ನೆರೆಯುತ್ತದೆ. ಆಗ ಮಹಾವಿಷ್ಣುವು ಮಹಾದೇವರಿಗೆ ಸಮಾಧಾನ ಮಾಡುತ್ತಾರೆ ಹಾಗೂ ಇದಕ್ಕೆ ಪರಿಹಾರ ಸೂಚಿಸಲು ಕೇಳುತ್ತಾರೆ. ಆಗ ಪರಶಿವರು ನಂದಿಯನ್ನು ಕರೆದು ಉತ್ತರ ದಿಕ್ಕಿನಲ್ಲಿ ಹೋಗಿ ಅಲ್ಲಿ ಯಾವುದಾದರೂ ಪ್ರಾಣಿಯ ಶಿರವನ್ನು ಸೂರ್ಯೋದಯದ ವೊಲಾಗದೆ ತತಂದರೆ ನಾನು ಈ ಬಾಲಕನಿಗೆ ಮರು ಜೀವ ನೀಡುವುದಾಗಿ ಹೇಳುತ್ತಾರೆ. ನಂದಿಯು ಹುಡುಕುವ ಸಮಯದಲ್ಲಿ ಒಂದು ಆಣೆ ಮರಿ ಒಂಟಿಯಾಗಿ ಮಲಗಿರುವುದನ್ನು ಕಾಣುತ್ತಾರೆ. ಸೂರ್ಯೋದಯ ಹತ್ತಿರ ಬರುತ್ತಿರುವ ಕಾರಣ ಆ ಆನೆಯ ಶಿರವನ್ನು ತೆಗೆದು ಕೊಂಡು ಹೋಗುತ್ತಾರೆ. ನಂತರ ಆ ಬಾಲಕನಿಗೆ ಜೀವ ತುಂಬುತ್ತಾರೆ. ಹೀಗೆ ಗಣೇಶ ಕರಿಮುಖನಾಗುತ್ತಾನೆ. ಈ ಸಮಯದಲ್ಲಿ ಹಲವಾರು ದೇವತೆಗಳು ಹಲವಾರು ರೀತಿಯ ಶಕ್ತಿಯನ್ನು ಪ್ರಧಾನಿಸುತ್ತಾರೆ ಅದರಲ್ಲಿ ಒಂದು, ಬೇರೆ ದೇವತೆಗಳಿಗಿಂತ ಮೊದಲು ಗಣೇಶನಿಗೆ ಮೊದಲ ಪೂಜೆ ನಡೆಸಬೇಕು ಎನ್ನುವುದು ಹೀಗಾಗಿ ಗಣೇಶ ಪ್ರಥಮಪೂಜ್ಯ ಎಂದು ಕರೆಸಿಕೊಳ್ಳುತ್ತಾನೆ. ಹೀಗೆ ಗಣೇಶ ಭಾದ್ರಪದ ಶುಕ್ಲಪಕ್ಷದ ಚತುರ್ಥಿಯಂದು ಹುಟ್ಟುತ್ತಾರೆ. ಈ ದಿನವನ್ನೇ ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಎಂದು ಕರೆಯುತ್ತಾರೆ. 

ಆಚರಣೆ 

ಗಣೇಶ ಚತುರ್ಥಿಯಂದು ಮನೆಯನ್ನೆಲ್ಲ ಸ್ವಚ್ಛ ಮಾಡಿ ಹೂವು, ಮಾವಿನ ತೋರಣ ಹಾಗೂ ರಂಗೋಲೆಗಳಿಂದ ಸಿಂಗರಿಸಿ ಗಣೇಶನ ಮೂರ್ತಿಯನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸುವಿದು. ನಂತರ ವಿವಿಧ ರೀತಿಯ ಷೋಡಶೋಪಚಾರ ಪೂಜೆಗಳನ್ನು ನೆರವೇರಿಸಿ ಮಂಗಳಾರತಿಯನ್ನು ಮಾಡಿ ವಿವಿಧ ರೀತಿಯ ಹಣ್ಣುಗಳನ್ನು ಹಾಗೂ ವಿವಿಧಬಗೆಯ ಸಿಹಿ ಖಾದ್ಯ ಗಳನ್ನು ಇಟ್ಟು ನೈವೇದ್ಯ ಮಾಡುವುದು. ಒಂದು ಒಳ್ಳೆಯ ದಿನವನ್ನು ನೋಡಿ ಗಣೇಶನನ್ನು ವಿಸರ್ಜಿಸುವುದು ವಾಡಿಕೆ . 

ಚೌತಿ ಚಂದ್ರನನ್ನು  ಏಕೆ ನೋಡಬಾರದು 

ಗಣೇಶ  ಚತುರ್ಥಿ ದಿನದಂದು ಚಂದ್ರನನ್ನು ನೋಡಬಾರದು ಎಂಬ ಮಾತಿದೆ. ಅಂದು ಚಂದ್ರನನ್ನು ನೋಡಿದರೆ ಅಪವಾದಗಳು ಬರುತ್ತದೆ ಎನ್ನುತ್ತಾರೆ. ಇದಕ್ಕೆ ಕಾರಣ ಗಣೇಶ ಚಂದ್ರನಿಗೆ ನೀಡಿದ ಶಾಪ. ಅದೇನೆಂದರೆ ಚಂದ್ರನು ನಾನು ತುಂಬಾ ಸುಂದರನಾಗಿದ್ದೇನೆ ಎಂದು ಬೀಗುತ್ತಿರುತ್ತಾನೆ. ಆದರೆ ಒಂದು ದಿನದ ಗಣೇಶನನ್ನು ನೋಡಿ ಅವನ ಡೊಳ್ಳು ಹೊಟ್ಟೆಯನ್ನು ನೋಡಿ ಅವನನ್ನು ಅಪಹಾಸ್ಯ ಮಾಡುತ್ತಾನೆ. ಆಗ ಗಣೇಶ ಚಂದ್ರನಿಗೆ ನಿನ್ನ ತೇಜಸ್ಸು ನಶಿಸಲಿ ಎಂದು ಶಪಿಸುತ್ತಾನೆ ಇದರಿಂದ ಚಂದ್ರನು ಕಳಾಹೀನನಾಗುತ್ತಾನೆ. ನಂತರ ಅವನು ಕ್ಷಮೆ ಕೇಳಿದಾಗ ಗಣೇಶನು ಚಂದ್ರನಿಗೆ ಸ್ವಲ್ಪ ಸ್ವಲ್ಪವಾಗಿ ಅವನ ತೇಜಸ್ಸು ಹಿಂದಿರುಗುತ್ತದೆ ಎಂದು ಹೆಳುತ್ತಾನೆ ಹೀಗೆ ಅಮಾವಾಸ್ಯ ಹಾಗೂ ಹುಣ್ಣಿಮೆ ಹುಟ್ಟಿಕೊಂಡಿತು ಎಂದು ಹಾಗೂ ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡ ಬಾರದು ಎಂದು ಹೇಳುತ್ತಾರೆ.
ಇದಕ್ಕೆ ಉದಾಹರಣೆ ಎಂದರೆ ಶ್ರೀ ಕೃಷನು ಚೌತಿ ಚಂದ್ರನನ್ನ ನೋಡಿದ ನಂತರ ಶಮಂತಕ ಮಣಿಯನ್ನು ಅಪಹರಿಸಿರುವ ಆರೋಪ ಬರುತ್ತದೆ ಎಂಬ ಕಥೆ ಇದೆ. 

ಸಾರ್ವಜನಿಕ ಗಣೇಶೋತ್ಸವದ ಬಗ್ಗೆ 

ಹಿಂದೆ ಮನೆಗಳಲ್ಲಿ ಮಾಡುತ್ತಿದ್ದ ಗಣೇಶ ಹಬ್ಬವನ್ನು ಮೊದಲಿಗೆ ಛತ್ರಪತಿ ಶಿವಾಜಿ ಅವರು ಪುಣೆಯಲ್ಲಿ ಸಾರ್ವಜನಿಕವಾಗಿ ಒಂದು ಉತ್ಸವವಾಗಿ ಆಚರಿಸಿದರು. ನಂತರ ಬ್ರಿಟಿಷರ ಅಳಿವಿಕೆಯಲ್ಲಿ ಇದರ ಮಹತ್ವ ಕಳೆದು ಕೊಂಡಿತು. ಆದರೆ ಈ ಉತ್ಸವವನ್ನು ಲೋಕಮಾನ್ಯ ತಿಲಕ್ ರವರು ತಮ್ಮ ಸ್ವಾತಂತ್ರ ಹೋರಾಟದ ಸಮಯದಲ್ಲಿ ಜನರನ್ನು ಒಟ್ಟು ಗೂಡಿಸಲು ಮತ್ತೆ ಸಾರ್ವಜನಿಕ ಉತ್ಸವವನ್ನಾಗಿಸಿದರು.

ಗಣೇಶ ಚತುರ್ಥಿ ಹಬ್ಬವನ್ನು ಇಡೀ ಭಾರತದಾಧ್ಯಂತ ಆಚರಿಸುತ್ತಾರೆ, ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದಲ್ಲಿ ಹೆಚ್ಚಾಗಿ ಆಚರಿಡುತ್ತಾರೆ
ಈ ಹಬ್ಬವನ್ನು ಭಾರತದಲ್ಲಿ ಅಲ್ಲದೆ ನೇಪಾಳ , ಸಿಂಗಾಪುರ್, ಮಲೇಷಿಯಾ, ಆಸ್ಟ್ರೇಲಿಯಾ, ಅಮೇರಿಕಾ ದಂತಹ ರಾಷ್ಟ್ರಗಲ್ಲು ಆಚರಿಸುತ್ತಾರೆ. 

Comments

Popular posts from this blog

Importance of soil testing in agriculture

Soil sample collection and preparation for analysis

Importance Of C:N Ratio in plants